ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಕರ್ತವ್ಯ ನಿಷ್ಠೆಯಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಆರ್ಥಿಕವಾಗಿ ವಂಚನೆಗೊಳಗಾಗುವ ಭೀತಿಯಿದೆ. ಎಚ್ಚರಿಕೆಯಿಂದಿರಬೇಕು. ವ್ಯಾಪಾರಿಗಳಿಗೆ ಧನ ಗಳಿಕೆಗೆ ನಾನಾ ಮಾರ್ಗಗಳು ಕಂಡುಬರಲಿದೆ.ವೃಷಭ: ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ದಾಂಪತ್ಯದಲ್ಲಿ ಸುಂದರ ಕ್ಷಣ ಕಳೆಯುವ ಯೋಗ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.ಮಿಥುನ: ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲು ಹಲವು ಅಡೆತಡೆಗಳು ಬಂದೀತು. ಆತ್ಮವಿಶ್ವಾಸ