ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹೊಸ ವಸ್ತು ಖರೀದಿಸಬೇಕೆಂಬ ನಿಮ್ಮ ಹಂಬಲಕ್ಕೆ ಅನಿವಾರ್ಯವಾಗಿ ಕಡಿವಾಣ ಹಾಕಬೇಕಾಗುತ್ತದೆ. ದೇಹಾರೋಗ್ಯದ ಸಮಸ್ಯೆಗಳು ಚಿಂತೆಗೆ ಕಾರಣವಾಗಲಿದೆ. ಆದರೆ ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು.ವೃಷಭ: ಹಣಕಾಸಿನ ಖರ್ಚು ವೆಚ್ಚದಲ್ಲಿ ಹಿಡಿತ ಅಗತ್ಯ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಯೋಗವಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದರಿಂದ ಸಂಭಾವ್ಯ ಅಪಾಯ ದೂರವಾಗಲಿದೆ.ಮಿಥುನ: ವೃತ್ತಿರಂಗದಲ್ಲಿ ನಿಮಗೆ ಅನುಕೂಲಕರ ವಾತಾವರಣ ಕಂಡುಬರಲಿದೆ. ಮಹತ್ವದ ನಿರ್ಧಾರ ಕೈಗೊಳ್ಳುವ