ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ವ್ಯವಹಾರದಲ್ಲಿ ಅಡಚಣೆಗಳಿದ್ದರೂ ನೆಮ್ಮದಿ ಕಂಡುಬರಲಿದೆ. ಬಂಧು ಮಿತ್ರರ ಸಹಕಾರದಿಂದ ಹೊಸ ಕೆಲಸಕ್ಕೆ ಕೈ ಹಾಕಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ್ಯವಾಗಲಿದೆ. ತಾಳ್ಮೆಯಿರಲಿ.ವೃಷಭ: ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಮಕ್ಕಳ ನಿಮಿತ್ತ ಖರ್ಚು ವೆಚ್ಚಗಳಾಗಲಿವೆ. ಆಸ್ತಿ ವಿಚಾರದಲ್ಲಿ ಧನವ್ಯಯವಾದೀತು. ವ್ಯಾಪಾರೀ ವರ್ಗದವರಿಗೆ ಹಿತಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ.ಮಿಥುನ: ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗಲಿದ್ದು ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ.