ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಿರಿಯರಿಂದ ಸುಖ ಸಂತೋಷ ನಿಮ್ಮದಾಗಲಿದೆ. ಸರಕಾರೀ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಸ್ವಾಮರ್ಥ್ಯದಿಂದ ಧನ ಸಂಪಾದನೆ ಮಾಡಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ವೃದ್ಧಿ ಯೋಗ. ತಾಳ್ಮೆ, ಸಂಯಮವಿರಲಿ.ವೃಷಭ: ನಿಮ್ಮ ಸಾಹಸ ಮನೋಭಾವ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲವನ್ನೂ ವ್ಯಾಪಾರೀ ಬುದ್ಧಿಯಿಂದ ನೋಡುವುದನ್ನು ಬಿಡಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಚಿಂತೆ ಬೇಡ.ಮಿಥುನ: ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.