ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವ್ಯಾಪಾರೀ ವರ್ಗದವರಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ದೇಹಾರೋಗ್ಯದಲ್ಲಿ ವೃದ್ಧಿ ಕಂಡುಬರುವುದು. ಹಳೆಯ ಮಿತ್ರರ ಸಮಾಗಮವಾದೀತು. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.ವೃಷಭ: ಬೇರೆಯವರು ನಿಮ್ಮ ಬಗ್ಗೆ ಹೇಳುವ ಅಭಿಪ್ರಾಯಗಳಿಗೆ ಕಿವಿಗೊಡಬೇಕಾಗಿಲ್ಲ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲರ ಗಮನ ಸೆಳೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಪ್ರಗತಿ ಕಂಡುಬರಲಿದೆ.ಮಿಥುನ: ಹೊಸದಾಗಿ ಉದ್ಯೋಗ ಆರಂಭಿಸಿದವರಿಗೆ ಒಳ್ಳೆಯ ದಿನಗಳು. ಸಹೋದ್ಯೋಗಿಗಳಿಂದು ಉತ್ತಮ ಸಹಕಾರ ಕಂಡುಬರಲಿದೆ. ಭೂಮಿ, ವಾಹನಾದಿ ಖರೀದಿ