ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಪರರಿಗೆ ಸಹಾಯ ಮಾಡಿದ ನೆಮ್ಮದಿ ನಿಮಗೆ ಸಿಗಲಿದೆ. ಬೇರೆಯವರ ಚಾಡಿಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣವಿರಲಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನಿರೀಕ್ಷೆಯಂತೆ ಪ್ರಗತಿ ಕಾಣದೇ ನಿರಾಸೆಯಾದೀತು. ಆಪ್ತರ ಸಹಾಯಕ್ಕೆ ನಿರೀಕ್ಷೆ ಮಾಡಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ದೇಹಾರೋಗ್ಯದಲ್ಲಿ ಕಾಳಜಿ ಅಗತ್ಯ.ಮಿಥುನ: ವೃತ್ತಿರಂಗದಲ್ಲಿ ಎದುರಾಗುವ ಸವಾಲುಗಳಿಗೆ ಕ್ರಿಯಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಿದ್ದೀರಿ.