ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕಾಗಿ ನಿಮ್ಮ ಸತತ ಪರಿಶ್ರಮ ಅಗತ್ಯ. ನಿಮ್ಮ ಬಗ್ಗೆ ಹೀಯಾಳಿಸಿದವರೇ ನಿಮ್ಮ ಸಹಾಯ ಅರಸಿ ಬರಲಿದ್ದಾರೆ. ಉದಾರ ಮನೋಭಾವದಿಂದ ಹಣ ಕಳೆದುಕೊಳ್ಳಬೇಡಿ. ತಾಳ್ಮೆ ಅಗತ್ಯ.ವೃಷಭ: ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಾದೀತು. ಸಹೋದ್ಯೋಗಿಗಳಿಂದ ಸಕಾಲದಲ್ಲಿ ನೆರವು ಸಿಗಲಿದೆ. ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗುತ್ತದೆ.ಮಿಥುನ: ಸಂದರ್ಭಕ್ಕೆ ತಕ್ಕಂತೆ ನಿಮ್ಮ ನಿರ್ಧಾರಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.