ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವೈವಾಹಿಕ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ. ಆಪ್ತರನ್ನು ಭೇಟಿಯಾಗಲಿದ್ದು ಮನಸ್ಸಿಗೆ ಸಂತೋಷ ಸಿಗಲಿದೆ. ಉನ್ನತಾಧಿಕಾರಿಗಳಿಗೆ ಜವಾಬ್ಧಾರಿ ಹೆಚ್ಚೀತು. ಆರ್ಥಿಕವಾಗಿ ಜಾಗರೂಕತೆಯಿಂದ ಖರ್ಚು ವೆಚ್ಚ ಮಾಡಿದರೆ ಉತ್ತಮ.ವೃಷಭ: ಅನಿವಾರ್ಯ ಕಾರಣಗಳಿಗೆ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪರರ ನಿಂದನೆಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸಂಗಾತಿಯ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ತಾಳ್ಮೆಯಿರಲಿ.ಮಿಥುನ: ನಿಮ್ಮ ತಪ್ಪುಗಳಿಗೆ ಇತರರನ್ನು ಹೊಣೆ ಮಾಡುವ ಪ್ರವೃತ್ತಿ ಬೇಡ. ಉದ್ಯೋಗ ಕ್ಷೇತ್ರದಲ್ಲಿ