ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉನ್ನತ ಹಂತಕ್ಕೇರುವ ನಿಮ್ಮ ಪ್ರಯತ್ನಕ್ಕೆ ಅಡ್ಡಿ ಆತಂಕಗಳು ಎದುರಾದೀತು. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೊಗಲಿದ್ದೀರಿ. ಗೃಹಿಣಿಯರಿಗೆ ಕೆಲಸದೊತ್ತಡ ಹೆಚ್ಚಾಗಲಿದೆ. ಸಂಗಾತಿಯ ಸಹಕಾರ ನೆಮ್ಮದಿ ನೀಡಲಿದೆ.ವೃಷಭ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಭಾಗಶಃ ಯಶಸ್ಸು ಸಾಧಿಸಲಿದ್ದೀರಿ. ದೇವರ ಪ್ರಾರ್ಥನೆ ಮಾಡಿ.ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಎದುರಾಳಿಗಳನ್ನು ಮೀರಿ ಮುನ್ನಡೆ ಸಾಧಿಸಲಿದ್ದೀರಿ. ಹಣಕಾಸಿನ