ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಲಿದ್ದು, ಒಂದು ರೀತಿಯ ಕಿರಿ ಕಿರಿ ಅನುಭವಿಸಲಿದ್ದೀರಿ. ನಿಮ್ಮ ಕಷ್ಟಗಳಿಗೆ ಸಂಗಾತಿಯ ಸಾಥ್ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.ವೃಷಭ: ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವೆನಿಸಬಹುದು. ಮಾತಿನ ಮೇಲೆ ನಿಗಾ ಇರಲಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವ್ಯವಹಾರ ಚತುರತೆಯಿಂದ ಆರ್ಥಿಕವಾಗಿ ಲಾಭ ಕಂಡುಕೊಳ್ಳಲಿದ್ದೀರಿ.ಮಿಥುನ: ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ ಸಂಪಾದಿಸಲಿದ್ದು, ಕೌಟುಂಬಿಕವಾಗಿ