ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ವ್ಯವಹಾರಗಳ ಬಗ್ಗೆ ಬೇರೆಯವರು ಸಂಶಯ ಪಟ್ಟುಕೊಳ್ಳಬಹುದು. ಕೈಗೊಳ್ಳುವ ಕಾರ್ಯಗಳಲ್ಲಿ ದೃಢತೆಯಿರಲಿ. ಗೃಹರಿಪೇರಿ ಕೆಲಸಗಳಿಗಾಗಿ ಸಣ್ಣ ಪುಟ್ಟ ಖರ್ಚುಗಳಾಗುವ ಸಾಧ್ಯತೆಯಿದೆ.ವೃಷಭ: ವೃತ್ತಿರಂಗದಲ್ಲಿ ಮೊದಲೇ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳುವ ಜಾಣ್ಮೆ ಪ್ರದರ್ಶಿಸಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ.ಮಿಥುನ: ಉದ್ಯೋಗ, ವ್ಯವಹಾರಗಳಲ್ಲಿ ಪೈಪೋಟಿ ಎದುರಾಗಲಿದೆ. ಗುರುಹಿರಿಯರಿಂದ ಲಾಭವಾಗಲಿದೆ. ಕೌಟುಂಬಿಕವಾಗಿ ಸುಖ, ನೆಮ್ಮದಿ ದೊರೆಯಲಿದೆ.