ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬಹಳ ದಿನಗಳ ನಂತರ ಪ್ರೀತಿ ಪಾತ್ರರ ಭೇಟಿ ಸಂತೋಷ ಕೊಡಲಿದೆ. ಇಷ್ಟಭೋಜನ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಣ್ಣ ಪುಟ್ಟ ಮನಸ್ತಾಪಗಳನ್ನು ಮರೆತು ಮುನ್ನಡೆಯುವುದು ಉತ್ತಮ.ವೃಷಭ: ಆರ್ಥಿಕವಾಗಿ ಹಣಕಾಸಿನ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಯಂತ್ರೋಪಕರಣಗಳ ವೃತ್ತಿಯವರಿಗೆ ಕೊಂಚ ಬಿಡುವು ಸಿಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ.ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ