ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ, ವ್ಯವಹಾರದಲ್ಲಿ ಅತಿಯಾಗಿ ಇನ್ನೊಬ್ಬರ ಅವಲಂಬನೆ ಬೇಡ. ಸಹೋದ್ಯೋಗಿಗಳು ಮಾಡುವ ವಂಚನೆಗಳನ್ನು ಬಯಲಿಗೆಳೆಯಲಿದ್ದೀರಿ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ.ವೃಷಭ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಕೈಲಾದವರಿಗೆ ಸಹಾಯ ಮಾಡುವುದರಿಂದ ನೆಮ್ಮದಿ ದೊರೆಯಲಿದೆ. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಸವಾಲುಗಳು ಎದುರಾದೀತು. ಗೃಹೋಪಯೋಗಿ ವಸ್ತುಗಳ