ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮಕ್ಕಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ ಖುಷಿ ನಿಮ್ಮದಾಗಲಿದೆ. ಆರ್ಥಿಕವಾಗಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಕ್ರಿಯಾತ್ಮಕವಾಗಿ ಯೋಚಿಸಿದರೆ ಲಾಭ ಸಾಧ್ಯತೆ.ವೃಷಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಭೀತಿ ಎದುರಾಗಲಿದೆ. ಕೌಟುಂಬಿಕವಾಗಿ ಅಭಿವೃದ್ಧಿ, ನಿಮ್ಮ ಕೆಲಸಗಳಿಗೆ ಪ್ರೋತ್ಸಾಹ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ ಹೆಚ್ಚಲಿದೆ. ತಾಳ್ಮೆಯಿರಲಿ.ಮಿಥುನ: ನೀವು ಮಾಡಬೇಕೆಂದುಕೊಂಡಿದ್ದ ಕೆಲಸ ಇನ್ನೊಬ್ಬರು ಮಾಡುವಂತಹ ಪರಿಸ್ಥಿತಿಯಾದೀತು.