ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೂತನ ಮಿತ್ರರ ಸಮಾಗವಾಗಲಿದ್ದು, ಮಾನಸಿಕವಾಗಿ ಸಂತೋಷ ಸಿಗುವುದು. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಕೂಡಿಟ್ಟ ಧನ ಸಂಪತ್ತು ಅನಿವಾರ್ಯ ಕಾರಣಗಳಿಗೆ ಖರ್ಚಾಗಲಿದೆ.ವೃಷಭ: ನಿಮ್ಮ ಮನೋಭಾವ, ಧೋರಣೆ ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಗುಣ ನಿಮ್ಮದಲ್ಲ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ತಲ್ಲೀನತೆ ಹೆಚ್ಚಾಗುವುದು. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಸಾಮಾಜಿಕವಾಗಿ ಗೌರವ ಸಂಪಾದಿಸುವ ಯೋಗ ನಿಮ್ಮದಾಗುವುದು. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ.