ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅವಕಾಶಗಳಿಗೆ ಕಾಯುತ್ತಾ ಕೂರುವ ಬದಲು ನೀವೇ ಹುಡುಕಿಕೊಂಡು ಹೋಗುವುದು ಉತ್ತಮ. ಭವಿಷ್ಯದ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.ವೃಷಭ: ಅನಿರೀಕ್ಷಿತವಾಗಿ ಧನಾಗಮನವಾಗುವುದರಿಂದ ಅಂದುಕೊಂಡ ಕೆಲಸಗಳನ್ನು ಸುಗಮವಾಗಿ ನೆರವೇರಿಸಲಿದ್ದೀರಿ. ಮನೆಯಲ್ಲಿ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಇಷ್ಟಮಿತ್ರರನ್ನು ಭೇಟಿ ಮಾಡುವ ಯೋಗವಿದೆ.ಮಿಥುನ: ಹೊಸದಾಗಿ ಕೆಲಸ ಆರಂಭಿಸುವ ಮುನ್ನ ಕುಟುಂಬಸ್ಥರ ಅಭಿಪ್ರಾಯ ತಿಳಿದುಕೊಳ್ಳುವುದು ಉತ್ತಮ. ಸುಬ್ರಹ್ಮಣ್ಯ ದೇವರ ಪ್ರಾರ್ಥನೆಯಿಂದ ಮನಸ್ಸಿಗೆ