ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವ್ಯವಸ್ಥಿತವಾದ ಯೋಜನೆ ಮಾಡುವುದರ ಮೂಲಕ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಲಿದ್ದೀರಿ. ಸಾಂಸಾರಿಕವಾಗಿ ಪ್ರೀತಿ ಪಾತ್ರರ ಭೇಟಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಹಣಕಾಸಿನ ವಿಚಾರದಲ್ಲಿ ಕಿರಿ ಕಿರಿಯಾದೀತು.ವೃಷಭ: ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ವಹಿಸಲಿದ್ದೀರಿ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಅಂದುಕೊಂಡಂತೇ ಕೆಲಸಗಳು ಸಾಗಲಿದ್ದು, ಮನಸ್ಸಿಗೆ ನೆಮ್ಮದಿಯಾಗಲಿದೆ.