ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸುವ ಧೈರ್ಯ ಮಾಡಲಿದ್ದೀರಿ. ಕೌಟುಂಬಿಕವಾಗಿ ಕೆಲವೊಂದು ಕಿರಿ ಕಿರಿಗಳಾದೀತು. ಪ್ರೀತಿ ಪಾತ್ರರ ಬೆಂಬಲ ನಿಮಗೆ ಸಿಗಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ.ವೃಷಭ: ಬೇರೆಯವರ ಮಾತಿಗೆ ನೋವಾಗುವಂತಹ ಪ್ರಸಂಗ ಎದುರಾದೀತು. ಹೆಚ್ಚಿನ ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ವಹಿಸಬೇಕಾಗುತ್ತದೆ. ತಾಳ್ಮೆಯಿರಲಿ.ಮಿಥುನ: ಇಷ್ಟಮಿತ್ರರೊಂದಿಗೆ ಪ್ರವಾಸ ಮಾಡುವ ಯೋಗ ನಿಮ್ಮದಾಗಲಿದೆ.