ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಹಠಮಾರೀ ಧೋರಣೆಯಿಂದ ಇತರರಿಗೆ ತೊಂದರೆಯಾದೀತು. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಮೇಲಧಿಕಾರಿಗಳ ಪ್ರಶಂಸೆ ಪಡೆಯಲಿದ್ದೀರಿ.ವೃಷಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ನಾಲಿಗೆ ಚಪಲದಿಂದ ಆರೋಗ್ಯ ಸಮಸ್ಯೆಯಾದೀತು. ಎಚ್ಚರಿಕೆಯಿರಲಿ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಕಾರ್ಯರಂಗದಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಸಮಯ, ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವುದು ಮುಖ್ಯ.