ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಮಚಿತ್ತದಿಂದ ಎಲ್ಲವನ್ನೂ ಎದುರಿಸಿಕೊಂಡು ಹೋಗುವ ಧೈರ್ಯ ಬೆಳೆಸಿಕೊಳ್ಳಲಿದ್ದೀರಿ. ಇನ್ನೊಬ್ಬರ ಚಾಡಿಮಾತಿಗೆ ಕಿವಿಗೊಡಬೇಕಾಗಿಲ್ಲ. ಮಕ್ಕಳಿಂದ ಸಂತೋಷ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಕಂಡುಬಂದೀತು.ವೃಷಭ: ರಾಜಕೀಯ ರಂಗದಲ್ಲಿರುವವರಿಗೆ ಹೊಸ ಶತ್ರುಗಳು ಹುಟ್ಟಿಕೊಳ್ಳಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ. ವ್ಯಾವಹಾರಿಕವಾಗಿ ಲಾಭ-ನಷ್ಟ ಸಮನಾಗಿರಲಿದೆ. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ ನಿಮ್ಮದಾಗುವುದು.ಮಿಥುನ: ಉದ್ಯೋಗ ನಿಮಿತ್ತ ಪರವೂರಿಗೆ ಸಂಚರಿಸುವ ಯೋಗ ನಿಮ್ಮದಾಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.