ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಮಚಿತ್ತದಿಂದ ಕೈಗೊಳ್ಳುವ ನಿರ್ಧಾರಗಳು ನಿಮಗೆ ಅನುಕೂಲವಾಗಲಿದೆ. ಬೇರೆಯವರ ಕಾರ್ಯವೈಖರಿ ಬಗ್ಗೆ ವಿನಾಕಾರಣ ಅಭಿಪ್ರಾಯ ಹೇಳಲು ಹೋಗಬೇಡಿ. ನೆರೆಹೊರೆಯವರಿಗೆ ಸಹಾಯ ಮಾಡಲಿದ್ದೀರಿ.ವೃಷಭ: ದೇಹಾರೋಗ್ಯದ ಬಗ್ಗೆ ಉದಾಸೀನ ಪ್ರವೃತ್ತಿ ಬೇಡ. ಸತ್ಕಾರ್ಯಗಳಿಗೆ ಕೈ ಜೋಡಿಸಲಿದ್ದೀರಿ. ಇಷ್ಟಮಿತ್ರರನ್ನು ಬಹಳ ದಿನಗಳ ನಂತರ ಭೇಟಿಯಾಗುವ ಯೋಗ. ಕಾರ್ಯರಂಗದಲ್ಲಿ ಮೇಲಧಿಕಾರಿಗಳ ಪ್ರಶಂಸೆ ವ್ಯಕ್ತವಾಗಲಿದೆ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಬಯಸಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾಗುತ್ತದೆ.