ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವಿದ್ಯಾರ್ಥಿಗಳಿಗೆ, ರಾಜಕೀಯ ಮುಖಂಡರಿಗೆ ಮುನ್ನಡೆಯ ಯೋಗ. ಆಹಾರೋದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾದೀತು. ಕಾರ್ಯನಿಮಿತ್ತ ಪ್ರಯಾಣ ಮಾಡುವುದರಿಂದ ದೇಹಾಯಾಸವಾದೀತು. ಎಚ್ಚರಿಕೆಯಿರಲಿ.ವೃಷಭ: ವೈವಾಹಿಕ ಪ್ರಯತ್ನದಲ್ಲಿ ಪ್ರಗತಿ ಕಂಡುಬರಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು. ಭೂ, ವಾಹನ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬರುವುದು. ಮಾತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ದಿಡೀರ್ ಆಗಿ ನಿರ್ಧಾರ ಕೈಗೊಳ್ಳುವ ಪ್ರವೃತ್ತಿ ಕಂಡುಬಂದೀತು. ಇನ್ನೊಬ್ಬರಿಗಾಗಿ ಬೇರೆ ಊರಿಗೆ ಪ್ರಯಾಣ ಮಾಡುವ