ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆರೋಗ್ಯದಲ್ಲಿ ತೃಪ್ತಿದಾಯಕ ಚೇತರಿಕೆ. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷಕ್ಕೆ ದಾರಿ ಮಾಡಿಕೊಡಬೇಡಿ. ಕಾರ್ಯನಿಮಿತ್ತ ದೀರ್ಘ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ವ್ಯಾಪಾರಿಗಳಿಗೆ ಮುನ್ನಡೆಯಿರಲಿದೆ.ವೃಷಭ: ನಿಮ್ಮ ಮೆಚ್ಚಿನ ವ್ಯಕ್ತಿಗಳನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ.ಮಿಥುನ: ಉದ್ಯೋಗ,ವ್ಯವಹಾರದಲ್ಲಿ ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ಕ್ರಿಯಾತ್ಮಕ ಕೆಲಸಗಳಿಗೆ ತಕ್ಕ ಮನ್ನಣೆ