ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೀವು ಅತಿಯಾಗಿ ನಂಬಿದ್ದವರಿಂದಲೇ ನೋವು ಅನುಭವಿಸುವ ಪರಿಸ್ಥಿತಿ ಎದುರಾದೀತು. ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಹೊಸ ಅವಕಾಶಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಲಿದ್ದೀರಿ.ವೃಷಭ: ಅಧ್ಯಯನ ಶೀಲರಿಗೆ ಹೊಸ ಅವಕಾಶಗಳು ಕಂಡುಬರಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಏಳು ಬೀಳುಗಳು ಸಾಮಾನ್ಯ. ಸಾಂಸಾರಿಕವಾಗಿ ಸುಖಕ್ಕೆ ಕೊರತೆಯಾಗದು. ಆಘಾತಕಾರಿ ಸುದ್ದಿ ಕೇಳಿಬಂದೀತು. ಎಚ್ಚರಿಕೆಯಿರಲಿ.ಮಿಥುನ: ಸಾಂಸಾರಿಕವಾಗಿ ಕೆಲವೊಂದು ವಿಚಾರಗಳಿಂದ ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ವಾಸ್ತವ ಸ್ಥಿತಿ ಅರಿತು