ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ನೀವಾಗಿಯೇ ಕೆಲವೊಂದು ಸಮಸ್ಯೆಗಳನ್ನು ಮೈಮೇಲೆಳೆದುಕೊಳ್ಳಲಿದ್ದೀರಿ. ಸಂಗಾತಿಯ ಸಹಕಾರ ನಿರೀಕ್ಷಿಸಬಹುದು. ತಾಳ್ಮೆಯಿರಲಿ.ವೃಷಭ: ಮಕ್ಕಳ ಭವಿಷ್ಯಕ್ಕಾಗಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾದೀತು. ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.ಮಿಥುನ: ಹೊಸದಾಗಿ ಏರ್ಪಟ್ಟಿರುವ ಸಂಬಂಧಗಳಿಂದ ನಿಮಗೆ ಅನುಕೂಲವಾದೀತು. ನೆರೆಹೊರೆಯವರೊಂದಿಗೆ ಸಂಬಂಧ ವೃದ್ಧಿಯಾಗಲಿದೆ. ಕೈಲಾಗದವರಿಗೆ ಸಹಾಯ ಮಾಡಿ ತೃಪ್ತಿ ಕಂಡುಕೊಳ್ಳಲಿದ್ದೀರಿ. ದೇವತಾ