ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮಗೆ ಅತೀವ ಕಷ್ಟವೆನಿಸುವ ವಿಚಾರಗಳನ್ನು ಆದಷ್ಟು ಮರೆಯಲು ಪ್ರಯತ್ನಿಸುವಿರಿ. ಸಂಗಾತಿಯು ಅನಗತ್ಯವಾಗಿ ಅಪಾರ್ಥ ಮಾಡಿಕೊಳ್ಳುವಂತಾಗಲಿದೆ. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.ವೃಷಭ: ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ವ್ಯಾವಹಾರಿಕವಾಗಿ ಹಿತ ಶತ್ರುಗಳ ಕಾಟ ಕಂಡುಬಂದೀತು. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆಯ ಕೊರತೆಯುಂಟಾದೀತು.ಮಿಥುನ: ಮನಸ್ಸಿನ ಭಾವನೆಗಳನ್ನು ಬಲವಂತವಾಗಿ ಅದುಮಿಟ್ಟುಕೊಳ್ಳಬೇಕಾಗುತ್ತದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ