ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಶಾರೀರಿಕ ಸುಖ ವೃದ್ಧಿಯಾಗಲಿದ್ದು, ಹೊಸ ಆಲೋಚನೆಗಳು ನಿಮ್ಮಲ್ಲಿ ಉತ್ಸಾಹ ತುಂಬಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಆದರೆ ಅಷ್ಟೇ ಖರ್ಚೂ ಇರಲಿದೆ. ತಾಳ್ಮೆಯಿರಲಿ.ವೃಷಭ: ಹೆಚ್ಚು ಜನ ಸಂಪರ್ಕದಿಂದ ನಿಮ್ಮ ಬಲ ವೃದ್ಧಿಯಾಗಲಿದೆ. ಬಂಧು ಮಿತ್ರರಿಂದ ಸಹಕಾರ ಕಂಡುಬರುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಸಿಗಲಿವೆ. ಕುಲದೇವರ ಪ್ರಾರ್ಥನೆ ಮಾಡಿ.ಮಿಥುನ: ನಿಮ್ಮ ಬಲಹೀನತೆಯನ್ನು ಇತರರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಎಚ್ಚರಿಕೆ ಅಗತ್ಯ.