ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೈವಾನುಗ್ರಹದಿಂದ ಮನೆಯಲ್ಲಿ ಸಂತೋಷ, ಸಮೃದ್ಧಿಯಿರಲಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಅಪರಿಚಿತರನ್ನು ನಂಬಿ ಮೋಸ ಹೋಗಬೇಡಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ತಾಳ್ಮೆಯಿರಲಿ.ವೃಷಭ: ನಿಮ್ಮ ಆಪ್ತರ ಬಗ್ಗೆ ಬೇರೆಯವರು ಚಾಡಿ ಮಾತು ಹೇಳಿಯಾರು. ಮನಸ್ಸಿನ ಮಾತು ಕೇಳಿ ಮುಂದುವರಿಯಿರಿ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ.ಮಿಥುನ: ಹೊಸ ಉದ್ಯೋಗಕ್ಕೆ ಸೇರಿಕೊಂಡಿದ್ದರೆ ಸವಾಲುಗಳು ಎದುರಾದೀತು. ಸಹೋದ್ಯೋಗಿಗಳ ನೆರವು