ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ, ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಆಪ್ತರಿಂದಲೇ ಸಮಸ್ಯೆಗಳಾದೀತು. ಅಧ್ಯಯನ ಪ್ರವೃತ್ತರಿಗೆ ಉನ್ನತ ಅವಕಾಶಗಳು ಸಿಗಲಿವೆ.ವೃಷಭ: ದೂರದ ವ್ಯವಹಾರಗಳಿಂದ ಅನಿರೀಕ್ಷಿತ ಲಾಭವಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.ಮಿಥುನ: ಕೆಲಸ ಕಾರ್ಯದಲ್ಲಿ ತಲ್ಲೀನತೆ ಕಂಡುಬರಲಿದೆ. ಉತ್ತಮ ವಾಕ್ಚರತೆಯಿಂದ ಎಲ್ಲರ ಮನಸ್ಸು ಗೆಲ್ಲಲಲಿದ್ದೀರಿ. ಹೊಸದಾಗಿ ಪರಿಚಿತರಾದವರಿಂದ