ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಳೆಯ ಸಮಸ್ಯೆಗಳಿಗೆ ಮರುಜೀವ ಬರಲಿದೆ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಬೇಕಾಗುತ್ತದೆ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾಗುತ್ತದೆ.ವೃಷಭ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಭೇಟಿ ಸಾಧ್ಯತೆ. ಸಾಂಸಾರಿಕವಾಗಿ ಸುಂದರ ಕ್ಷಣ ಕಳೆಯಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗ. ವ್ಯಾಪಾರಿಗಳಿಗೆ ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಅನಗತ್ಯ ಚಿಂತೆ ಬೇಡ.ಮಿಥುನ: ದೀರ್ಘ ಪ್ರಯಾಣದಿಂದ ದೇಹಾಯಾಸವಾದೀತು. ಇಷ್ಟಮಿತ್ರರೊಂದಿಗೆ ಕಾಲ ಕಳೆಯಲಿದ್ದೀರಿ.