ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವ್ಯಾವಹಾರಿಕವಾಗಿ ನಿಮಗೆ ಅಡ್ಡಿ ಮಾಡುತ್ತಿದ್ದವರಿಂದ ಮುಕ್ತಿ ಸಿಗುವುದು. ಸಾಂಸಾರಿಕವಾಗಿ ತಾಳ್ಮೆ, ಹೊಂದಾಣಿಕೆ ಅಗತ್ಯ. ನಿಮ್ಮ ಅಗತ್ಯವನ್ನೂ ಮೀರಿ ಖರ್ಚು ಮಾಡಲಿದ್ದೀರಿ. ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ.ವೃಷಭ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಭೇಟಿ ಸಾಧ್ಯತೆ. ಸಾಮಾಜಿಕವಾಗಿ ಸ್ಥಾನ ಮಾನ ಸಿಗಲಿದೆ. ಹಣಕಾಸಿನ ಹರಿವಿದ್ದರೂ ಖರ್ಚೂ ಇರಲಿದೆ. ಸಾಂಸಾರಿಕವಾಗಿ ನೆಮ್ಮದಿ ಕಂಡುಬರಲಿದೆ. ತಾಳ್ಮೆಯಿರಲಿ.ಮಿಥುನ: ಗುರುಹಿರಿಯರ ಆಶೀರ್ವಾದವಿರಲಿದೆ. ಕಾರ್ಯರಂಗದಲ್ಲಿ ನಿರೀಕ್ಷಿತ ಸ್ಥಾನಮಾನ ಸಿಗುವುದು.