ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಮಾತೃ ಸಮಾನರಿಂದ ಪ್ರೋತ್ಸಾಹ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಕೂಡುವ ಯೋಗ. ನಿರೀಕ್ಷಿಸಿದಷ್ಟು ಹಣ ಸಂಪಾದನೆಯಾಗದೇ ಬೇಸರವಾದೀತು.ವೃಷಭ: ಧನಸಂಪತ್ತಿನಿಂದ ಮನಸ್ಸಿಗೆ ತೃಪ್ತಿಯಾಗದು. ಉದ್ಯೋಗ, ವ್ಯವಹಾರದಲ್ಲಿ ಕ್ರಿಯಾತ್ಮಕ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ. ಕುಟುಂಬ ವರ್ಗದವರಿಂದ ಪ್ರೋತ್ಸಾಹ ಕಂಡುಬರಲಿದೆ. ಅನಗತ್ಯ ಚಿಂತೆ ಬೇಡ.ಮಿಥುನ: ಉತ್ತಮ ವಾಕ್ಚತುರತೆಯಿಂದ ಇತರರ ಗಮನ ಸೆಳೆಯಲಿದ್ದೀರಿ. ಬಂಧು ವರ್ಗದವರ ಭೇಟಿ ಸಾಧ್ಯತೆ. ಹಣಕಾಸಿನ ಹರಿವಿಗೆ ತೊಂದರೆಯಾಗದು.