ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸರಕಾರೀ ಉದ್ಯೋಗಿಗಳಿಗೆ ಸಂತೃಪ್ತಿಯ ಭಾವವಿರುವುದು. ವಾಹನ, ಭೂಮಿ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿ ಸೂಕ್ತ ಯೋಜನೆಯಿರಲಿ. ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ.ವೃಷಭ: ಧನಾರ್ಜನೆಗೆ ಕೊರತೆಯಾಗದು. ಆದರೆ ಸರಿಯಾದ ರೀತಿಯಲ್ಲಿ ಬಳಸುವುದರಲ್ಲಿ ಎಡವಲಿದ್ದೀರಿ. ಸಹೋದ್ಯೋಗಿಗಳ ಕಷ್ಟಕ್ಕೆ ನೆರವಾಗುವಿರಿ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.ಮಿಥುನ: ಹೊಸ ಮಿತ್ರರನ್ನು ಸಂಪಾದಿಸುವ ಯೋಗ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.