ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹೊಸದಾಗಿ ಆರಂಭಿಸಿದ್ದ ಉದ್ದಿಮೆಯಲ್ಲಿ ಯಶಸ್ಸು ಕಷ್ಟವೆನಿಸಬಹುದು. ಸ್ನೇಹಿತರ ಸಹಾಯ ಸಿಗಲಿದೆ. ಹಣಕಾಸಿನ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಕಟ್ಟಡ ಕಾಮಗಾರಿ ಕೆಲಸಗಳು ಮುಂದೂಡಿಕೆಯಾಗಲಿದೆ. ದಿನಂದತ್ಯಕ್ಕೆ ನೆಮ್ಮದಿ.ವೃಷಭ: ಆತ್ಮೀಯರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ಕಂಡುಬರಲಿದೆ. ಹೈನುಗಾರಿಕೆ ಉದ್ಯಮದಲ್ಲಿರುವವರಿಗೆ ಲಾಭ. ಕಿರು ಸಂಚಾರ ಮಾಡಲಿದ್ದೀರಿ.ಮಿಥುನ: ಎಷ್ಟೇ ಕಠಿಣ ಕೆಲಸವಾದರೂ ಆತ್ಮೀಯರ ಸಹಾಯವಿರುವುದರಿಂದ ಸುಲಭವಾಗಿ ಮಾಡಿ ಮುಗಿಸಲಿದ್ದೀರಿ.