ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅಧಿಕ ಧನವ್ಯಯವಾಗಲಿರುವ ದಿನವಿಂದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಕಂಡುಬಂದೀತು. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ಉತ್ತಮ ಧನಾಗಮನವಾಗಲಿದ್ದರೂ ಖರ್ಚಿಗೆ ಹಲವು ದಾರಿಗಳಾದೀತು. ಮನೆ, ವಾಹನ ರಿಪೇರಿ ಕೆಲಸಗಳಿಗೆ ಕೈ ಹಾಕಬೇಕಾಗುತ್ತದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕಿರು ಸಂಚಾರ ಮಾಡಲಿದ್ದೀರಿ.ಮಿಥುನ: ನೆರೆಹೊರೆಯವರೊಡನೆ ಸಂಬಂಧ ಸುಧಾರಣೆಯಾಗಲಿದೆ.