ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಸಹೋದರ ಸಮಾನರಿಂದ ಸಹಾಯ ಒದಗಿಬರುವುದು. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ ಕಂಡುಬರಲಿದೆ. ತಾಳ್ಮೆಯಿರಲಿ.ವೃಷಭ: ಪರವೂರಿನ ವ್ಯವಹಾರಗಳಿಂದ ಚಿಂತೆ ಹೆಚ್ಚಾದೀತು. ಸ್ನೇಹಿತರ ಸಹಾಯ ಪಡೆಯಲಿದ್ದೀರಿ. ದಾಂಪತ್ಯದಲ್ಲಿ ಪರಸ್ಪರ ಸಹಕಾರವಿರಲಿ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಂಡುಬರುವುದು. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.ಮಿಥುನ: ಅಧಿಕ ಪರಿಶ್ರಮದಿಂದ ದೇಹಾಯಾಸವಾಗುವ ಸಾಧ್ಯತೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನೆರೆಹೊರೆಯವರಿಂದ ಸಹಾಯ ಒದಗಿಬರಲಿದೆ.