ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮಗೆ ಅತ್ಯಂತ ಆಪ್ತರಾದವರಿಗೆ ಕಷ್ಟಗಳು ಬಂದಾಗ ಜೊತೆ ನಿಲ್ಲಲಿದ್ದೀರಿ. ದೇಹಾರೋಗ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ತಾಳ್ಮೆಯಿರಲಿ.ವೃಷಭ: ಸಿಟ್ಟಿನ ಭರದಲ್ಲಿ ತೀರ್ಮಾನ ಕೈಗೊಳ್ಳಲು ಹೋಗಬೇಡಿ. ಹಿರಿಯರ ಸಲಹೆ ಪಾಲಿಸುವುದು ಉತ್ತಮ. ಮೇಲಧಿಕಾರಿಗಳಿಂದ ಕಾರ್ಯದೊತ್ತಡ ಕಂಡುಬಂದೀತು. ಕಿರು ಸಂಚಾರ ಮಾಡಲಿದ್ದೀರಿ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಅನುಕೂಲಕರವಾದ ಪರಿಸ್ಥಿತಿಯಿರುವುದು. ಸಹೋದರಾದಿ ಸಂಬಂಧಿಗಳಿಂದ ಸಹಾಯವೊದಗಿಬರಲಿದೆ. ಹಿರಿಯರಿಗೆ ದಾನ