ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ಹಿಂದಿನ ತಪ್ಪುಗಳಿಗೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ನಿಮ್ಮ ಮಾತುಗಳಿಂದ ಸಂಗಾತಿಯ ಮನಸ್ಸಿಗೆ ನೋವಾದೀತು. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಯಶಸ್ಸು ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಲಿದ್ದೀರಿ.ವೃಷಭ: ಉದ್ಯೋಗ, ವ್ಯವಹಾರದಲ್ಲಿ ಮೇಲಧಿಕಾರಿಗಳ ಆದೇಶ ಪಾಲಿಸಲೇಬೇಕಾದ ಪರಿಸ್ಥಿತಿಯಿರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಕಳೆದು ಹೋದ ವಸ್ತುಗಳು ತಾನಾಗಿಯೇ ಕೈ ಸೇರಲಿವೆ.ಮಿಥುನ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಯೋಗ್ಯ