ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಕಂಡುಬಂದರೂ ಧನಗಳಿಕೆಗೆ ಹಲವು ಮೂಲಗಳು ಕಂಡುಬರಲಿದೆ. ಆರ್ಥಿಕ ಯೋಜನೆಗಳನ್ನು ಮಾಡಲಿದ್ದೀರಿ. ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಹೊಸಬರನ್ನು ಪರಿಚಯ ಮಾಡಿಕೊಳ್ಳಲಿದ್ದೀರಿ. ನಿಮ್ಮ ಕಾರ್ಯಕ್ಷಮತೆ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ. ಪ್ರೇಮಿಗಳಿಗೆ ಆತಂಕದ ಗಳಿಗೆ ಎದುರಾದೀತು. ತಾಳ್ಮೆಯಿರಲಿ.ಮಿಥುನ: ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ. ಕಾರ್ಯರಂಗದಲ್ಲಿ