ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಬಡ್ಡಿ ವ್ಯವಹಾರ ಮಾಡುವವರು ಎಚ್ಚರಿಕೆಯಿಂದಿರುವುದು ಮುಖ್ಯ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆಯಿರಲಿದೆ.ವೃಷಭ: ಕೆಲವು ಮಹತ್ವದ ತೀರ್ಮಾನ ಕೈಗೊಳ್ಳುವ ಸಮಯವಿದು. ನೆರೆಹೊರೆಯವರ ಸಹಾಯ ಪಡೆಯಲಿದ್ದೀರಿ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಕೊಡು-ಕೊಳ್ಳುವ ವ್ಯವಹಾರದಲ್ಲಿ ಲಾಭ.ಮಿಥುನ: ಹೊಸದಾಗಿ ಆರಂಭಿಸಿದ್ದ ಕೆಲಸಗಳಿಗೆ ಅಡೆತಡೆಗಳು ಬಂದೀತು. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ವಿದ್ಯಾರ್ಥಿಗಳಿಗೆ ಶಿಕ್ಷಕ