ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಭವಿಷ್ಯದ ದೃಷ್ಟಿಯಿಂದ ಕೆಲವು ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಯೋಜನಾಬದ್ಧವಾಗಿ ಕೆಲಸ ಮಾಡುವುದರಿಂದ ಯಶಸ್ಸು ಕಾಣಲಿದ್ದೀರಿ. ಮಹಿಳೆಯರಿಗೆ ಆರ್ಥಿಕವಾಗಿ ಮುನ್ನಡೆಯಿರಲಿದೆ.ವೃಷಭ: ಅತಿಯಾಗಿ ಇನ್ನೊಬ್ಬರ ಬಗ್ಗೆ ಯೋಚನೆ, ನಕಾರಾತ್ಮಕ ಯೋಚನೆಗಳು ಮನಸ್ಸನ್ನು ಕಾಡಲಿದೆ. ಮನಸ್ಸಿನ ನೆಮ್ಮದಿಗಾಗಿ ಇಷ್ಟದೇವರ ಮೊರೆ ಹೋಗಲಿದ್ದೀರಿ. ಗುರುಹಿರಿಯರ ಸಲಹೆ ಪಡೆಯಲಿದ್ದೀರಿ.ಮಿಥುನ: ದೈಹಿಕ ನೋವು, ಗಾಯ ಇತ್ಯಾದಿಗಳಾಗುವ ಸಾಧ್ಯತೆ. ಕುಟುಂಬ ಸದಸ್ಯರ ಸಹಕಾರ ಮನಸ್ಸಿಗೆ ನೆಮ್ಮದಿ ಕೊಡಲಿದೆ.