ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ತಾಳ್ಮೆಯಿಂದ ವ್ಯವಹರಿಸಿ. ಬೇರೆಯವರಿಗೆ ನಿಮ್ಮ ಕೆಲಸಗಳು ಕಿರಿ ಕಿರಿ ಉಂಟು ಮಾಡೀತು. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಯಂತ್ರೋಪಕರಣಗಳಿಂದ ಅವಘಡ ಸಂಭವ, ಎಚ್ಚರವಿರಲಿ.ವೃಷಭ: ಆರ್ಥಿಕವಾಗಿ ಸ್ಥಿತಿ, ಗತಿ ಸುಧಾರಿಸಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು. ಆದರೆ ದೈಹಿಕವಾಗಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು. ಸಂಗಾತಿಯ ಸಹಕಾರವಿರಲಿದೆ.ಮಿಥುನ: ಲೇವಾದೇವಿ ವ್ಯವಹಾರ ನಡೆಸುವವರಿಗೆ ಮುನ್ನಡೆ. ಕಾರ್ಯರಂಗದಲ್ಲಿ ಪೈಪೋಟಿ ಕಂಡುಬಂದೀತು.