ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಮೇಷ ರಾಶಿ :- ಎಷ್ಟೇ ಹಣ ವ್ಯಯಿಸಿದರೂ ನೀವು ಬಯಸಿದ್ದು ಸಿಗಲಿದೆ. ಸೆಲೆಬ್ರಿಟಿಗಳನ್ನು ಭೇಟಿ ಮಾಡಲಿದ್ದೀರಿ. ಉನ್ನತ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳಿಗೆ ಅಗತ್ಯವಾದ ಹಣ ಸಿಗುವುದು. ದೂರದ ಪ್ರಯಾಣಗಳಲ್ಲಿ ತೊಂದರೆಗಳು ಉಂಟಾಗುತ್ತವೆ. ಕಾರ್ಯಕ್ರಮದಲ್ಲಿ ನಿಮ್ಮ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತವೆ. ವೃಷಭ ರಾಶಿ :- ಮಹಿಳೆಯರು ಶಾಪಿಂಗ್ ಮತ್ತು ಡಿನ್ನರ್ ಪಾರ್ಟಿಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುವರು.