ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಮೇಷ:- ಹಣಕಾಸಿನ ವ್ಯವಹಾರಗಳಿಂದ ಮನಸ್ಸಿಗೆ ನೆಮ್ಮದಿಯ ಕೊರತೆ. ವ್ಯಾಪಾರ ಅಭಿವೃದ್ಧಿಯ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ದೈವ ದರ್ಶನ ಮಾಡಲು ಸೂಚನೆಗಳಿವೆ. ವೃತ್ತಿನಿರತರಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮಕ್ಕಳು ಮತ್ತು ಪ್ರೀತಿಪಾತ್ರರ ಜೊತೆ ಆನಂದಿಸಿ. ಉದ್ಯೋಗಿಗಳು ಬದಲಾವಣೆಗಾಗಿ ಮಾಡುವ ಪ್ರಯತ್ನಗಳು ಫಲ ನೀಡುತ್ತವೆ. ವೃಷಭ:- ಉದ್ಯೋಗಿಗಳು ಮೇಲಧಿಕಾರಿಗಳಿಂದ ಒತ್ತಡ ಮತ್ತು ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ. ಪಿಂಚಣಿ ಮತ್ತು ವಿಮೆ