ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಮೇಷ: ಸೃಜನಶೀಲ ಕೆಲಸಗಳು ಯಶಸ್ವಿಯಾಗುತ್ತವೆ. ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ಸಂತೋಷ ಮತ್ತು ತೃಪ್ತಿ ಇರುತ್ತದೆ. ಪ್ರಯಾಣವು ವಿನೋದಮಯವಾಗಿರಬಹುದು. ವ್ಯಾಪಾರ-ವ್ಯವಹಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡಬಹುದು. ಸಮಯದ ಅನುಕೂಲತೆಯ ಲಾಭವನ್ನು ಪಡೆದುಕೊಳ್ಳಿ. ಹಣ ಪಡೆಯುವುದು ಸುಲಭವಾಗುತ್ತದೆ. ಉದ್ಯೋಗದಲ್ಲಿ ಹೊಂದಾಣಿಕೆ ಇರುತ್ತದೆ. ಕೆಲಸದ ಹೊರೆ ಮತ್ತು ಅಧಿಕಾರದಲ್ಲಿ ಹೆಚ್ಚಳವಾಗಬಹುದು. ವೃಷಭ: ಅನಾವಶ್ಯಕ ವಾದ ವಿವಾದಗಳಾಗಬಹುದು. ಆರೋಗ್ಯದಲ್ಲಿ ಏರುಪೇರಾಗಬಹುದು. ವ್ಯವಹಾರದಲ್ಲಿ ಆತುರ ಬೇಡ.