ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಮೇಷ:- ಆಪತ್ಕಾಲದಲ್ಲಿ ಬಂಧುಗಳು ನೆರವಾಗಿ ನಿಲ್ಲುತ್ತಾರೆ. ದೂರದ ಪ್ರಯಾಣದ ಯೋಜನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಮನಸ್ಸಿನಲ್ಲಿ ಭಯ, ಸಂದೇಹಗಳಿದ್ದರೂ ಆಡಂಬರ ತೋರಿ ಕೆಲಸಗಳನ್ನು ಸುಸೂತ್ರವಾಗಿ ಮಾಡಿ ಮುಗಿಸುತ್ತಾರೆ. ಖಾದಿ, ಕೈಮಗ್ಗ ಮತ್ತು ನೂಲು ಬಟ್ಟೆಗಳ ವ್ಯಾಪಾರಿಗಳಿಗೆ ಮುನ್ನಡೆ. ಪ್ರೇಮಿಗಳ ನಡುವೆ ಸಂಬಂಧ ಗಟ್ಟಿಯಾಗುತ್ತದೆ. ವೃಷಭ:- ನಿಮ್ಮ ವಾಹನವನ್ನು ಇತರರಿಗೆ ನೀಡುವಾಗ ಜಾಗರೂಕರಾಗಿರಿ. ಕುಟುಂಬ ಸದಸ್ಯರಲ್ಲಿ ಪರಸ್ಪರ ತಿಳುವಳಿಕೆಯ ಕೊರತೆ