1, ಅಡುಗೆ ಮಾಡುವಾಗ, ಆಹಾರ ಸೇವಿಸುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕಿನಲ್ಲಿ ಕುಳಿತು ಕೊಳ್ಳಲೇಬಾರದು. ಆಹಾರವು ಸರಿಯಾಗಿ ಪಚನಗೊಂಡು ಉತ್ತಮ ಆರೋಗ್ಯ ಲಭಿಸಬೇಕಾದರೆ ಪೂರ್ವ ದಿಕ್ಕಿಗೆ ಮುಖಮಾಡಿ ಸೇವಿಸಬೇಕು. 2.ಆರೋಗ್ಯ ಮತ್ತು ಸಂತೋಷವನ್ನು ಗಳಿಸಲು ಕೊಠಡಿಯ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿರಿ.ಒಂದೇ ರೀತಿಯ ಬಣ್ಣಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. 3.ಹಾಸಿಗೆಯ ಮುಂಭಾಗದಲ್ಲಿ ಕನ್ನಡಿಯನ್ನು ಇರಿಸುವುದು ಬೇಡ, ಅಥವಾ ಇದ್ದರೆ ಅವುಗಳನ್ನು ಮುಚ್ಚಿ ದುಸ್ವಪ್ನಗಳಿಂದ ಮುಕ್ತಿ ಪಡೆಯಿರಿ.