ಬೆಂಗಳೂರು: ಶಿವ ದೇವಾಲಯಕ್ಕೆ ಹೋದರೆ ರುದ್ರಾಭಿಷೇಕ ಮಾಡುವುದು ನಮ್ಮ ಪದ್ಧತಿ. ಶಿವನಿಗೆ ಅತ್ಯಂತ ಪ್ರೀತ್ಯರ್ಥವಾಗಿ ರುದ್ರಾಭಿಷೇಕ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ?ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವುಕ್ಕಿ ಬಂತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನ ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಸಾಮಾನ್ಯವಾಗಿ ಧ್ಯಾನದಿಂದ ಎಚ್ಚರಗೊಂಡರೆ ಶಿವ ಕೋಪಗೊಳ್ಳುತ್ತಾನೆ.ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವ ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಹಾಲಾಹಲವನ್ನು ಕುಡಿದು ಮೂರ್ಛೆ ಹೋಗುತ್ತಾನೆ. ಆಗ ಬ್ರಹ್ಮ ದೇವನು