ಶನಿವಾರಗಳಂದು ಈ ಎಂಟು ವಸ್ತುಗಳನ್ನು ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು, ಶನಿವಾರ, 19 ಜನವರಿ 2019 (09:30 IST)

ಬೆಂಗಳೂರು: ಶನಿವಾರ ಎಂಬುದು ಶನಿ ಗ್ರಹನ ವಾರ. ಈ ದಿನ ಕೆಲವು ವಸ್ತುಗಳನ್ನು ಖರೀದಿ ಮಾಡುವುದು ಮನೆಗೆ, ಮನೆಯ ಸದಸ್ಯರಿಗೆ ಅಶುಭವಾಗುತ್ತದೆ ಎಂಬ ನಂಬಿಕೆಯಿದೆ. ಅವು ಯಾವುವು ನೋಡೋಣ.


 
ಕಬ್ಬಿಣ
ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರ ಖರೀದಿಸುವುದರಿಂದ ದುರಾದೃಷ್ಟ ಬರುತ್ತದೆ.
 
ಎಣ್ಣೆ
ಶನಿವಾರಗಳಂದು ಕೆಲವರು ಎಣ್ಣೆ ಹಚ್ಚಿ ಸ್ನಾನ ಮಾಡುವುದೇ ಇಲ್ಲ. ಅದೇ ರೀತಿ ಎಣ್ಣೆ ಖರೀದಿ ಮಾಡಿದರೆ ಮನೆಯ ಸದಸ್ಯರಿಗೆ ರೋಗ ಬರುತ್ತದೆ ಎಂಬ ನಂಬಿಕೆಯಿದೆ.
 
ಉಪ್ಪು
ಈ ದಿನ ಉಪ್ಪು ಖರೀದಿಸಿದರೆ ಜೀವನ ಪರ್ಯಂತ ಸಾಲದಲ್ಲಿ ಮುಳುಗಬೇಕಾಗುತ್ತದೆ, ಋಣ ಬಾಧೆಗೊಳಗಾಗಬೇಕಾಗುತ್ತದೆ.
 
ಕಸಬರಿಕೆ
ಕಸಬರಿಕೆ ಖರೀದಿ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಪ್ರಭಾವ ಹೆಚ್ಚಿ, ದಾರಿದ್ರ್ಯ ಸೃಷ್ಟಿಯಾಗುತ್ತದೆ.
 
ಶಾಯಿ
ಶನಿವಾರಗಳಂದು ಪುಸ್ತಕ ಮತ್ತಿತರ ಬರೆಯುವ ಸಾಧನಗಳನ್ನು ಖರೀದಿಸಬಹುದು. ಆದರೆ ಶಾಯಿ ಖರೀದಿಸುವುದರಿಂದ ಮನೆಯಲ್ಲಿ ವಿರಸವುಂಟಾಗುತ್ತದೆ.
 
ಇಂಧನ
ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆಯಂತಹ ಇಂಧನಗಳನ್ನು ಖರೀದಿಸುವುದರಿಂದ ಮನೆಯೊಳಗೆ ಕಲಹ ಹೆಚ್ಚುವುದು.
 
ಶೂ ಖರೀದಿ
ಈ ದಿನ ಶೂ ಖರೀದಿ ಮಾಡುವುದರಿಂದ ನೀವು ಕೈಗೊಂಡ ಕಾರ್ಯಗಳಲ್ಲಿ ಸೋಲನುಭವಿಸುವಿರಿ.
 
ಕಪ್ಪು ಎಳ್ಳು
ಈ ದಿನ ಕಪ್ಪು ಎಳ್ಳು ದಾನ ಮಾಡುವುದೇನೋ ಒಳ್ಳೆಯದೇ. ಆದರೆ ಈ ದಿನ ಕಪ್ಪು ಎಳ್ಳು ಖರೀದಿ ಮಾಡಿದರೆ ಜೀವನದಲ್ಲಿ ಸಮಸ್ಯೆಗಳನ್ನು ಆಹ್ವಾನಿಸಿದಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಹಿಳೆಯರ ಹುಬ್ಬು ಹೀಗಿದ್ದರೆ ಭವಿಷ್ಯ ಹೀಗಿರುತ್ತದೆ!

ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ...

news

ಧನು ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಧನು ರಾಶಿಯವರ ಗುಣ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಮಕರ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...