ಬೆಂಗಳೂರು: ಈಗ ಎಲ್ಲದಕ್ಕೂ ಅವಸರ. ಎಲ್ಲರೂ ಅವಸರದ ಯುಗದಲ್ಲೇ ಇದ್ದಾರೆ. ಯಾರಿಗೂ ತಾಳ್ಮೆ ಎಂಬುದೇ ಇಲ್ಲ. ಊಟದ ವಿಚಾರದಲ್ಲೂ ಇದೇ ಕತೆ. ಸಮಾರಂಭಗಳಲ್ಲೂ ತಟ್ಟೆ ಕೈಯಲ್ಲಿ ಹಿಡಿದು ಊಟ ಮಾಡುವ ಪದ್ಧತಿ ಸಾಮಾನ್ಯವಾಗಿದೆ.